Basavanna navara vachanagalu
Pages
Table of Contents: Basavanna
Links
Home
Purandara daasa songs
Basavanna
Shankaracharya
Thursday, August 1, 2019
Ase Ameesha taamasa
ಆಸೆ ಆಮಿಷ ತಾಮಸ ಹುಸಿ ವಿಷಯ ಕುಟಿಲ ಕುಹಕ ಕ್ರೋಧ ಕ್ಷುದ್ರ ಮಿಥ್ಯೆ ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದಡೆ
ನಿನ್ನತ್ತಲೆನ್ನ ಬರಲೀಯವು
ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚೈವರ ಭಕ್ತರ ಮಾಡು ಕೂಡಲಸಂಗಮದೇವಾ
Enna nudi nanage nanjaayittu
ಎನ್ನ ನುಡಿ ಎನಗೆ ನಂಜಾಯಿತ್ತು
ಎನ್ನ ಅಲಗೆ ಎನ್ನ ಕೊಂದಿತ್ತು
ಆನು ಪಾಪಿಯಯ್ಯಾ ಆನು ಕೋಪಿಯಯ್ಯಾ
ತರಳತನದಲ್ಲಿ ಕೆಟ್ಟೆನಯ್ಯಾ
ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ
ಆಳು ಮುನಿದಡೆ ಆಳೇ ಕೆಡುವನು
ಆಳ್ದ ಮುನಿದಡೆ ಆಳೇ ಕೆಡುವನು
ನೀವು ಮುನಿದಡೆ ನಾನೇ ಕೆಡುವೆನಯ್ಯಾ
ಕೂಡಲಸಂಗಮದೇವಾ
Sunday, June 30, 2019
Giriya shikharada mele
ಗಿರಿಯ ಶಿಖರದ ಮೇಲೆ ಕುಳಿತುಕೊಂಡು ಜಡೆಯನೇರಿಸಿಕೊಂಡು ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ ಸವೆದ ಪಾಷಾಣ!
ನಮ್ಮ ಕೂಡಲಸಂಗನ ಶರಣರ ಪ್ರಸಾದ ಜೀವಿಗಳಲ್ಲದವರು ಏಸು ಕಾಲವಿರ್ದಡೆನು ಅದರಂತು ಕಾಣಿರಣ್ಣಾ
Aragu tindu karaguva
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ
Jambu dweepa
ಜಂಬೂದ್ವೀಪನವಖಂಡಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು
ಗೆಲುವೆನೆಂಬ
ಭಾಷೆ ಭಕ್ತನದು
ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ
ಕೂಡಲಸಂಗಮದೇವ
Monday, April 8, 2019
Sharanu Sharanartha
ಶರಣು ಶರಣಾರ್ಥಿ ಋಣ ತಪ್ಪಿದ ಹೆಂಡಿರಲ್ಲಿ ಗುಣ ತಪ್ಪಿದ ನಂಟರಲ್ಲಿ ಜೀವವಿಲ್ಲದ ದೇಹದಲ್ಲಿ ಫಲವೇನೋ? ಆಳ್ದನೊಲ್ಲದಾಳಿನಲ್ಲಿ ಸಿರಿತೊಲಗಿದರಸಿನಲ್ಲಿ ವರವಿಲ್ಲದ ದೈವದಲ್ಲಿ ಫಲವೇನೋ? ಕಳಿದ ಹೂವಿನಲ್ಲಿ ಕಂಪನು ಉಳಿದ ಸೊಳೆಯಲ್ಲಿ ಪೆಂಪನು ಕೊಳೆಚೆನೀರಿನಲ್ಲಿ ಗುಣವನರಸುವಿರಿ! ಮರುಳೆ ವರಗುರು ವಿಶ್ವಕ್ಕೆಲ್ಲ ಗಿರಿಜಾಮನೋವಲ್ಲಭ ಪರಮ ಕಾರುಣಿಕ ನಮ್ಮ ಕೂಡಲಸಂಗಮದೇವ
Friday, August 3, 2018
Kere haLLa bhavigaLu
ಕೆರೆ ಹಳ್ಳ ಭಾವಿಗಳು ಮೈದೆಗೆದರೆ
ಗುಳ್ಳೆ, ಗೊರಚೆ, ಚಿಪ್ಪು ಕಾಣಬಹವು!
ವಾರಿಧಿ ಮೈದೆಗೆದರೆ
ರತ್ನ ಮುತ್ತುಗಳು ಕಾಣಬಹವು!
ಕೂಡಲಸಂಗನ ಶರಣರು
ಮನದೆರೆದು ಮಾತನಾಡಿದರೆ
ಲಿಂಗವೇ ಕಾಣಬಹುದು!
Newer Posts
Older Posts
Home
Subscribe to:
Posts (Atom)