Basavanna navara vachanagalu
Pages
Table of Contents: Basavanna
Links
Home
Purandara daasa songs
Basavanna
Shankaracharya
Tuesday, August 20, 2019
Kulagettade kedabahudallade Chala geda baradu
ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು,
ಛಲಗೆಟ್ಟಡೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು,
ಭಕ್ತಿಯ ಅನು ಕೆಟ್ಟಡೆ ಕೆಡಬಹುದಲ್ಲದೆ ಆಯತ ಕೆಡಬಾರದಯ್ಯಾ,
ಆಯತ ಕೆಟ್ಟಡೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ.
ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು,
ಇನ್ನು ಮುಟ್ಟಿದೆನಾದಡೆ ನಿಮ್ಮ ರಾಣಿವಾಸದಾಣೆ.
Monday, August 12, 2019
haavina hedegaLa
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ,
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.
Thursday, August 1, 2019
Ase Ameesha taamasa
ಆಸೆ ಆಮಿಷ ತಾಮಸ ಹುಸಿ ವಿಷಯ ಕುಟಿಲ ಕುಹಕ ಕ್ರೋಧ ಕ್ಷುದ್ರ ಮಿಥ್ಯೆ ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದಡೆ
ನಿನ್ನತ್ತಲೆನ್ನ ಬರಲೀಯವು
ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚೈವರ ಭಕ್ತರ ಮಾಡು ಕೂಡಲಸಂಗಮದೇವಾ
Enna nudi nanage nanjaayittu
ಎನ್ನ ನುಡಿ ಎನಗೆ ನಂಜಾಯಿತ್ತು
ಎನ್ನ ಅಲಗೆ ಎನ್ನ ಕೊಂದಿತ್ತು
ಆನು ಪಾಪಿಯಯ್ಯಾ ಆನು ಕೋಪಿಯಯ್ಯಾ
ತರಳತನದಲ್ಲಿ ಕೆಟ್ಟೆನಯ್ಯಾ
ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ
ಆಳು ಮುನಿದಡೆ ಆಳೇ ಕೆಡುವನು
ಆಳ್ದ ಮುನಿದಡೆ ಆಳೇ ಕೆಡುವನು
ನೀವು ಮುನಿದಡೆ ನಾನೇ ಕೆಡುವೆನಯ್ಯಾ
ಕೂಡಲಸಂಗಮದೇವಾ
Newer Posts
Older Posts
Home
Subscribe to:
Posts (Atom)