ಪುಣ್ಯ ಪಾಪವೆಂಬ ಉಭಯ ಕರ್ಮವನಾರು ಬಲ್ಲರಯ್ಯಾ ? ಇವನಾರುಂಬರು ! ಕಾಯ ತಾನುಂಬಡೆ ಕಾಯ ತಾ ಮಣ್ಣು ಜೀವ ತಾನುಂಬಡೆ ಜೀವ ತಾ ಬಯಲು ಈ ಉಭಯ ನಿರ್ಣಯವ ಕೂಡಲಸಂಗಮದೇವಾ ನಿಮ್ಮ ಶರಣ ಬಲ್ಲ